ಶಿವರಾತ್ರಿ
	ಶಿಶಿರ ಋತುವಿನ ಸಂದರ್ಭದಲ್ಲಿ ಆಚರಿಸುವ ಪ್ರಮುಖ ಹಬ್ಬ. ಮಾಘ ಬಹುಳದಲ್ಲಿ ಪ್ರದೋಷ ವ್ಯಾಪಿನಿಯಾದ ಚತುರ್ದಶೀ ದಿವಸ ಶಿವರಾತ್ರಿಯನ್ನು ಆಚರಿಸಬೇಕೆಂದು ಸ್ಮøತಿಯಲ್ಲಿ ಹೇಳಿದೆ. ಅಂದು ಶೈವರು ಉಪವಾಸವನ್ನಾಚರಿಸಿ ವಿಶೇಷ ಪೂಜಾದಿಗಳನ್ನು ಮಾಡುತ್ತಾರೆ. ಈ ಹಬ್ಬದಲ್ಲಿ ಉಪವಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ. ರಾತ್ರಿಯಲ್ಲಿ ಪ್ರತಿ ಯಾಮದಲ್ಲೂ ಬಿಲ್ವಾದಿಗಳಿಂದ ಶಿವನನ್ನು ಪೂಜಿಸುವರು. ವೈಷ್ಣವರೂ ಈ ಹಬ್ಬವನ್ನು ಆಚರಿಸುವ ಪದ್ಧತಿ ಇದೆ. ಶಿವಮಂದಿರಕ್ಕೆ ಹೋಗಿ ದರ್ಶನ ಮಾಡಲೇಬೇಕೆಂಬ ವಿಧಿ ಇದೆ. ಜಾಗರಣೆಯನ್ನು ವಿಧಿಸಲಾಗಿದೆ. ಶಿವರಾತ್ರಿಯ ವ್ರತಕಥೆ ಮತ್ತು ಮಹಾತ್ಮ್ಯೆಗಳು ಪುರಾಣಗಳಲ್ಲಿ ವರ್ಣನೆಗೊಂಡಿವೆ. ಅನೇಕ ಪುಣ್ಯಕ್ಷೇತ್ರಗಳಲ್ಲಿ ರಥೋತ್ಸವಗಳೂ ಜಾತ್ರೆಗಳೂ ನಡೆಯುತ್ತವೆ. ನಂಜನಗೂಡು, ಸುತ್ತೂರು,  ಧರ್ಮಸ್ಥಳ ಹಾಗೂ ಮಲೆಯ ಮಾದೇಶ್ವರ ಬೆಟ್ಟದಲ್ಲಿ ಈ ಹಬ್ಬದ ಆಚರಣೆ ವಿಶೇಷ.		
						*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ